ಮತ್ತೆ ಬಂದಿದೆ ದೀಪಗಳ ಹಬ್ಬ,
ಪಟಾಕಿಯ ಅಬ್ಬರ ಅಬ್ಬಬ್ಬ!
ಹೊಸ ಬಟ್ತೆ ಹಾಕುವ ಸಡಗರ,
ರಂಗೋಲಿ ಬಿಡಿಸುವ ಥರ ಥರ.
ಸುರ್ ಸುರ್ ಬತ್ತಿಯ ಸುರ ಸುರ,
ಸರ ಪಟಕಿಯ ಡಂ ಡಂ,
ಕಜ್ಜಾಯ ತಿನ್ನುವ ಗಬ ಗಬ,
ಹೊಟ್ಟೆ ಹಸಿಯುತಿದೆ ಭಗ ಭಗ.
ಅಜ್ಜಿಯ ಆರುತಿ ಹಾಡು,
ತಾತನ ಬಕ್ಶೀಸು,
ಆಪ್ಪನ ಜೋಡಿ ತೋರಣ ಕಟ್ಟಿದ ನೆನಪು,
ಅಮ್ಮನ ಎಣ್ಣೆ ಶಾಸ್ತ್ರದ ಹುರುಪು.
ಇವೆಲ್ಲವು ನನ್ನಲೊಂದು ಭಾಗ,
ಮರೆತಿಲ್ಲ ಎನೂ ಇನ್ನ,
ಮರಳುತಿರುವೆ ಭಾರತಕ್ಕೆಇಂದು,
ಬಲಿಪಾಡ್ಯಮಿಯ ದಿನದೊಂದು.