Tag Archives: #ಜೋಡಿ

ಜೋಡಿ

By | June 13, 2018

ಹೀಗೇ ನಿನ್ನ ಜೊತೆಯಲ್ಲಿ, ಕೈಗೆ ಕೈ ಜೋಡಿಸಿ, ಮನಕೆ ಮನವ ಕೂಡಿಸಿ, ಹೃದಯದಯದ ಒಂದೇ ಬಡಿತವಾಗಿ, ಮಿಡಿಯುವ ಆಸೆ. ದೂರದ ಮುಗಿಲನು, ಮುಟ್ಟುವಾಸೆ, ಕಾಣದ ಊರನು, ಕಾಣುವಾಸೆ. ನೀನಿರೆ ನನ್ನ ಜೊತೆಯಲ್ಲಿ, ಗೆಲ್ಲುವೆ ನಾ ಜಗವನು. ಆದರೆ, ಸೊತಿಹೆ ನಾ, ನಿನಗೆ ನನ್ನ ತನುಮನವನು. ನನ್ನ ಎಲ್ಲಾ ನಾಳೆಗಳು, ನಿನ್ನ ಜೊತೆ, ಜೋಡಿಯಾಗಿ, ಹೀಗೆ ಸಾಗಲಿ ಈ ಪಯಣ, ಪ್ರೇಮದಿ ಒಂದಾಗಿ.