Tag Archives: #kannada

ಕಾಮನಬಿಲ್ಲು

By | June 17, 2018

ನಿನ್ನ ನಗುವಿನ ದನಿ ಮಧುರವಾಗಿ ಕೇಳುತಿದೆ ನಿನ್ನ ಕಣ್ಣಿನ ಹೊಳಪು ಮನದ ಬೆಳಕನ್ನು ಬೆಳಗಿದೆ ನಿನ್ನ ರೂಪವು ಮನದ ಕಣ್ನಗಳಿಗೆ ಮುದವ ತಂದಿದೆ ನನ್ನ ಪ್ರೀತಿಯ ಕಾಮನ ಬಿಲ್ಲು ಮನದ ಬಾನಂಗಳದಲ್ಲಿ ಮೂಡಿದೆ.

ಜೋಡಿ

By | June 13, 2018

ಹೀಗೇ ನಿನ್ನ ಜೊತೆಯಲ್ಲಿ, ಕೈಗೆ ಕೈ ಜೋಡಿಸಿ, ಮನಕೆ ಮನವ ಕೂಡಿಸಿ, ಹೃದಯದಯದ ಒಂದೇ ಬಡಿತವಾಗಿ, ಮಿಡಿಯುವ ಆಸೆ. ದೂರದ ಮುಗಿಲನು, ಮುಟ್ಟುವಾಸೆ, ಕಾಣದ ಊರನು, ಕಾಣುವಾಸೆ. ನೀನಿರೆ ನನ್ನ ಜೊತೆಯಲ್ಲಿ, ಗೆಲ್ಲುವೆ ನಾ ಜಗವನು. ಆದರೆ, ಸೊತಿಹೆ ನಾ, ನಿನಗೆ ನನ್ನ ತನುಮನವನು. ನನ್ನ ಎಲ್ಲಾ ನಾಳೆಗಳು, ನಿನ್ನ ಜೊತೆ, ಜೋಡಿಯಾಗಿ, ಹೀಗೆ ಸಾಗಲಿ ಈ ಪಯಣ, ಪ್ರೇಮದಿ ಒಂದಾಗಿ.

ಕಾಂಕ್ರೀಟ್‌ ಜಂಗಲ್

By | June 6, 2018

ಓಟ ಓಟ, ಕೊನೆಯೇ, ಇಲ್ಲದ ಆಟ, ಊಟಕ್ಕಾಗಿಯೊ, ಚಟಕ್ಕಾಗಿಯೊ, ಶೋಕಿಯೊ, ನನ್ನಿಂದಾನೇ ಎಲ್ಲವೂ, ಅನೋ ಹಟ, ವಿಧಿ ಸಾಹೇಬನ ಚಾಟಿ ಏಟ, ತಿಂದ ಮೇಲೆ, ಎಲ್ಲವೂ ಧೂಳಿಪಟ, ಜೀವನದ ಪಾಠ,ಕಲಿಯುತ್ತಾ, ಅರಿತೆನು, ನಾನು ಕೇವಲ ಒಬ್ಬ ಪೋಷಕ ನಟ. ಬೇರೆಯೇ ಇರುವವನು, ನಾಯಕ ನಟ.

ಕನ್ನಡಿ

By | March 4, 2018

ಕನ್ನಡಿಯೊಳಗಿನ ಬಿಂಬವಾ ನೋಡುತ್ತಾ ನಾ ನಿಂತೆ, ಅಹಾ ಎಷ್ತು ಸೊಗಸೆಂದು, ಜಂಬ ಪಟ್ಟೆ, ಬದುಕಿನ ದಾರಿಯಲಿ, ಬಿಂಬಗಳ ಮುಖವಾಡ ಕಸಿಯಿತು, ನಾನು ಕಂಡಿದ್ದು ಇದೇ ಬಿಂಬವೇ, ಏಂದು ಚಿಂತ್ತಿಸುತ್ತಾ ನಿಂತೆ.