ನೆನಪಿನಾ ದೋಣಿ ಏರಿ,
ಮನದ ಕಡಲಿನಲ್ಲಿ ಧುಮುಕಿ,
ಓಂದೊಂದೇ ಕ್ಶಣಗಳ ಹೆಕ್ಕಿ,
ಹೆಣೆಯುತಿಹೆ ನೆನಪಿನ ಜೆಡೆಯ.
ಹೆಣೆದ ಜೆಡೆಯ ನೆನೆಯುತಾ,
ಸ್ವಲ್ಪ ಹೊತ್ತು ಕಳೆದೆ,
ನೆನಪಿನಾ ಅಂಗಳದಲ್ಲಿ,
ತನು ಮನವ ಮರೆತೆ,
ಆಗ ಕೇಳಿಸಿದ್ದು, ಒಂದು ಕೂಗು,
ನನ್ನ ಅರಿವಿಗೆ, ಮರಳಿಸಿದ , ಆ ಕೂಗು.
ಸ್ಟಾಪ್ ಬಂತ್ರಿ ಮೆಡಮ್ ಎಂದು,
ನನ್ನ ನೆನಪಿನ ಬಸ್ಸು, ಇಳಿಯುವ ಹೊತ್ತಾಗಿತ್ತು.
ನೆನಪಿನ ಹುಚ್ಚು ಕುದುರೆ,
ಒಡುವುದ ನಿಲ್ಲಿಸಿತು,
ನಿಜ ಸ್ಥಿತಿಗೆ ಮನವು,
ಥಟ್ಟನೆ ಹಿಂತಿರುಗಿತು.
ಅಂದಿನ ನೆನಪಲ್ಲಿ,
ಇಂದನ್ನು ಮರೆತಿತ್ತು ಮನವು, ಆಗ ಅನಿಸಿದ್ಧು,
ಎಷ್ಟು ಅದೃಷ್ಟವಂತರು ಮರೆವು ಇರುವವರು,
ನೆನಪುಗಳನ್ನು ಮರೆಯಬಲ್ಲವರು.